ಗುಟ್ಟೊಂದು ಹೇಳುವೆ

ಪರೋಪಕಾರಿ
ಉಪೇಂದ್ರ ಕುಮಾರ್

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ || ಪ ||

ಹಣವು ಹೇಳಿದಂತೆ ನೀನೆಂದು ಕೇಳಬೇಡ

ದಾಸನಾಗಿ ಧನಕೆ ನೀನೆಂದು ಬಾಳಬೇಡ || ೧ ||

ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹರು

ಝಾನ್ಸಿರಾಣಿ ಲಕ್ಷ್ಮಿ ಕಸ್ತೂರಿಬಾಯಿ ಯಾರು|| ೨ ||

ದೇವನೊಬ್ಬನಿರುವ ಅವನೆಲ್ಲ ನೋಡುತಿರುವ

ಅವನ ನೆರಳಿನಲ್ಲಿ ನಾವೆಲ್ಲ ಒಂದೆ ಎನುವ|| ೩ ||

ನಿಜವ ಕೇಳು ಜಗದಿ ಅನಾಥರಾರು ಇಲ್ಲ

ತಂದೆಯಾಗಿ ಮೇಲೆ ಆ ದೇವನಿರುವನಲ್ಲ|| ೪ ||

ಪರೋಪಕಾರಿ

ಚಿತ್ರ ನೋಡಿ